29 Jun 2025, 04:36 UTC≈1,780 views19 reactionsread 7 August 2026 Photo
ಸದಾಚಾರದ ಮಹತ್ವ
ಸದಾಚಾರ ಅಂದರೆ ಉತ್ತಮ ಆಚರಣೆಗಳು, ಇವೇ ನಮ್ಮ ಜೀವನದ ಆಧಾರವಾಗಿವೆ. ಸತ್ ಆಚರಣೆಯ ಅರ್ಥವೆಂದರೆ ನೈತಿಕ ಹಾಗೂ ಧಾರ್ಮಿಕ ಆಚರಣೆ ! ದೇವತೆಗಳೂ ಸದಾಚಾರವನ್ನು ಪಾಲಿಸುವವರೊಂದಿಗೆ ಇರುತ್ತಾರೆ ಹಾಗೂ ಯಾರೊಂದಿಗೆ ದೇವತೆಗಳಿದ್ದಾರೆ ಅವರ ಜೀವನವೂ ಆನಂದಮಯವಾಗುತ್ತದೆ.
ಇದು ಮಹಾಭಾರತದ ಸಮಯದ ಸಂಗತಿಯಾಗಿದೆ. ಆ ಸಮಯದಲ್ಲಿ ಸತ್ಯದೇವ ಎಂಬ ರಾಜನಿದ್ದನು. ಅವನು ಅತ್ಯಂತ ಸದಾಚಾರಿಯಾಗಿದ್ದನು. ಒಂದು ದಿನ ಅವರು ಬೆಳಗ್ಗೆ ಎದ್ದು ತನ್ನ ಕೋಣೆಯಿಂದ ಹೊರಬಂದಾಗ ಓರ್ವ ಸುಂದರ ಸ್ತ್ರೀಯು ಅರಮನೆಯಿಂದ ಹೊರಗೆ ಹೋಗುತ್ತಿರುವ…
❤8👍7🙏4
29 Jun 2025, 04:35 UTC≈1,430 views5 reactionsread 7 August 2026 Photo
ಮನಸ್ಸಿನ ರಚನೆ ಮತ್ತು ಕಾರ್ಯ
ನಾವು ಯಾವಾಗಲೂ ‘ನನ್ನ ಮನಸ್ಸಿನಲ್ಲಿ ಇಂತಹ ವಿಚಾರ ಬಂತು’, ಅಥವಾ ‘ ನನ್ನ ಮನಸ್ಸಿಗೆ ಹೀಗೆ ಅನ್ನಿಸುತ್ತದೆ’ ಎಂದು ಹೇಳುತ್ತೇವೆ. ಅನೇಕ ಮಿತ್ರರ ‘ಮನಸ್ಸಿನಲ್ಲಿ’ ದೇಶದ ಬಗ್ಗೆ ಅಪಾರ ಗೌರವ ಶ್ರದ್ಧೆ ಇದೆ. ಆದರೆ ಮನಸ್ಸು ಎಂದರೇನು? ಅದರ ರಚನೆ ಮತ್ತು ಕಾರ್ಯ ಏನು? ಇಂತಹ ಅನೇಕ ಪ್ರಶ್ನೆಗಳು ನಮ್ಮಲ್ಲಿ ಉದ್ಭವಿಸುತ್ತವೆ. ಈ ಲೇಖನದಿಂದ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ದೊರೆಯಲು ಸಹಾಯವಾಗುವುದು.
ಮನಸ್ಸಿನ ರಚನೆ ಮತ್ತು ಕಾರ್ಯ
ಮನಸ್ಸಿಗೆ ಎರೆಡು ಭಾಗ ಇರುತ್ತವೆ. ಒಂದು ಬಾಹ್ಯ ಮನಸ್ಸು ಮ…
❤5
26 Jun 2025, 06:41 UTC≈1,160 views3 reactionsread 7 August 2026 Photo
🌸 ಬಂಕಿಮ್ ಚಂದ್ರ ಚಟರ್ಜಿ ಜಯಂತಿ !
(26/6/25) 🌸
ವಂದೇ ಮಾತರಂ ಗೀತೆಯನ್ನು ರಚಿಸಿದ್ದು ವಂಗ ದೇಶಭಕ್ತ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಇವರು. ಕ್ರಿ.ಶ. ೧೮೭೬.ನಲ್ಲಿ ‘ಆನಂದಮಠ’ ಎಂಬ ಕಾದಂಬರಿಯನ್ನು ಬರೆಯುತ್ತಿರಲು ಅವರಿಗೆ ‘ವಂದೇ ಮಾತರಂ’ ಗೀತೆಯನ್ನು ರಚಿಸುವ ಪ್ರೇರಣೆ ಬಂತು ಎಂಬ ನಂಬಿಕೆ ಇದೆ. ಕ್ರಿ.ಶ. ೧೮೮೨ರಲ್ಲಿ ಈ ಕಾದಂಬರಿ ಪ್ರಕಾಶನಗೊಂಡ ಅಲ್ಪಾವಧಿಯಲ್ಲಿಯೇ ಈ ಗೀತೆ ಸ್ವಾತಂತ್ರ್ಯ ಹೋರಾಟಗಾರರ ಪ್ರೇರಣಾ ಸ್ಥಾನವನ್ನು ಗಿಟ್ಟಿಸಿತು.
ಪೂರ್ಣ ಲೇಖನ ಓದಲು👇:
https://www.hindujagruti.org/hinduism-for-kid…
🙏2👏1
24 Jun 2025, 08:16 UTC≈1,130 views3 reactionsread 7 August 2026 Photo
ದೇವಸ್ಥಾನ ಮತ್ತು ತೀರ್ಥಕ್ಷೇತ್ರದಲ್ಲಿರುವ ಪಾವಿತ್ರ್ಯವನ್ನು ಕಾಪಾಡಿ
ನಾವು ತೀರ್ಥಕ್ಷೇತ್ರ ಮತ್ತು ದೇವಸ್ಥಾನಗಳನ್ನು ಭೇಟಿ ಮಾಡುವಾಗ ನಮ್ಮ ತಪ್ಪು ನಡುವಳಿಕೆಯಿಂದ ಆ ಕ್ಷೇತ್ರದ ಪಾವಿತ್ರ್ಯವನ್ನು ಹಾಳು ಮಾಡಬಾರದು.
ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡುವಾಗ ಕೆಲವು ಆಂಶಗಳನ್ನು ಮನಸ್ಸಿನಲ್ಲಿಡಿ
೧. ದೇವಸ್ಥಾನದ ಪರಿಸರದಲ್ಲಿರುವಾಗ ಜೋರಾಗಿ ಮಾತನಾಡುವುದು, ಆಟವಾಡುವುದು, ದೂರವಾಣಿಯಲ್ಲಿ ಜೋರಾಗಿ ಮಾತನಾಡುವುದು ಮಾಡಬಾರದು.
೨. ಪಾದರಕ್ಷೆಗಳನ್ನು ದೇವಸ್ಥಾನದ ಒಳಪರಿಸರದಲ್ಲಿ ಹಾಕಿ ಒಡಾಡಬಾರದು; ಅದು ವಿಹಾರ ತಾಣವಲ್…
👍2❤1
22 Jun 2025, 04:12 UTC982 views5 reactionsread 7 August 2026 Photo
ಮಕ್ಕಳೇ, ‘ಬೇಗ ಮಲಗಿ ಮತ್ತು ಬೇಗ ಎದ್ದೇಳಿ’!
‘ಪ್ರತಿಯೊಬ್ಬರೂ ಕೂಡ ಸೂರ್ಯೋದಯದ ಮುಂಚೆ ಎದ್ದೇಳಬೇಕೆಂದು’ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ; ಆದರೆ ಇತ್ತೀಚಿಗೆ ಮಕ್ಕಳು ಅಧ್ಯಯನ ಅಥವಾ ಇನ್ಯಾವುದಾದರೂ ಕಾರಣದಿಂದ ತಡ ರಾತ್ರಿಯ ತನಕ ಕುಳಿತುಕೊಂಡು ಬೆಳಗ್ಗೆ ೮-೯ ಗಂಟೆಗೆ ಎದ್ದೇಳುವ ಕೆಟ್ಟ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಜಾಗರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಹಾನಿಕಾರಕವಾಗಿದೆ. ಇದಕ್ಕಿಂತ ರಾತ್ರಿ ಬೇಗ ಮಲಗಿ ಮತ್ತು ಬೆಳಗ್ಗೆ ಬೇಗ ಎದ್ದೇಳುವುದರಿಂದ ಆರೋಗ್ಯ ಮತ್ತು ಧನಸಂಪತ್ತು ಸಿಗುತ್ತದೆ ಎಂದು ಹೇಳಲಾಗಿದೆ…
❤5
19 Jun 2025, 06:18 UTC≈1,010 views2 reactionsread 7 August 2026 Photo
🌸 ಆಧ್ಯಾತ್ಮದಲ್ಲಿನ ಮೊದಲನೇ ಪಾಠ : ಅಹಂಕಾರ ಬೇಡ ! 🌸
ರಾಜಾ ಶೂರಸೇನನ ಆಧ್ಯಾತ್ಮದ ಜಿಜ್ಞಾಸೆ, ಆತ್ಮಾನಂದ ಮಹಾರಾಜರ ಮಾರ್ಗದರ್ಶನ ಪಡೆಯುವ ಇಚ್ಛೆ....
ಶೂರಸೇನ ಎಂಬ ಒಬ್ಬ ರಾಜನಿದ್ದನು. ಅವನು ತನ್ನ ರಾಜ್ಯವನ್ನು ಬಹಳಷ್ಟು ವೃದ್ಧಿಸಿದನು. ಅವನ ಪ್ರಜೆಗಳೂ ಸುಖದಿಂದ ಇದ್ದರು. ರಾಜನಿಗೆ ತನ್ನ ಶೌರ್ಯ, ರಾಜ್ಯ, ಐಶ್ವರ್ಯ ಹಾಗೂ ಕರ್ತೃತ್ವದ ಬಗ್ಗೆ ಬಹಳ ಅಭಿಮಾನವಿತ್ತು. ಅವನಿಗೆ ಆಧ್ಯಾತ್ಮವನ್ನು ಕಲಿಯುವ ತೀವೃ ಇಚ್ಛೆಯಾಯಿತು. ಆಗ ಶೂರಸೇನನು ತನ್ನ ಪ್ರಧಾನಿಯನ್ನು ಕರೆದು ರಾಜ್ಯದಲ್ಲಿ ಸರ್ವಶ್ರೇಷ್ಠ ಆಧ್ಯಾತ್ಮದಲ್ಲಿನ ಅಧ…
❤2
18 Jun 2025, 06:27 UTC860 views4 reactionsread 7 August 2026 Photo
ಚಂಚಲ ಮನಸ್ಸು
ಏನನ್ನು ಕೇಳಿದರೂ ಅದನ್ನು ಕೊಡಬಲ್ಲ ಕಲ್ಪತರು ಎಂದರೆ ಭಗವಂತ. ಆದರೆ ಮನಸ್ಸು ಚಂಚಲವಾಗಿದ್ದರೆ ಅದರಿಂದಾಗುವ ಅಪಾಯವೇನು ಎಂಬುವುದರ ಕುರಿತು ಒಂದು ಕಥೆ ಹೀಗಿದೆ: ಪ್ರಯಾಣಿಕನೊಬ್ಬನು ಬಹಳ ದೂರದಿಂದ ನಡೆಯುತ್ತ ಒಂದು ದೊಡ್ಡ ಬಯಲು ಪ್ರದೇಶಕ್ಕೆ ಬಂದನು. ಹಲವು ಗಂಟೆಗಳ ಕಾಲ ಅವನು ಬಿಸಿಲಿನಲ್ಲಿ ನಡೆಯುತ್ತಿದ್ದುದರಿಂದ ಬಹಳ ದಣಿದು ಬಸವಳಿದಿದ್ದನು. ವಿಶ್ರಾಂತಿಗಾಗಿ ಒಂದು ಮರದ ಕೆಳಗೆ ಕುಳಿತನು. ಆತನ ಮನಸ್ಸು ಹೀಗೆ ಯೋಚಿಸಿತು. ಇಲ್ಲೇ ಮಲಗಿಕೊಳ್ಳುವುದಕ್ಕೆ ಒಂದು ಮೆತ್ತನೆಯ ಹಾಸಿಗೆ ಸಿಕ್ಕಿದ್ದರೆ ಚೆನ್ನಾಗಿರ…
❤3👍1
17 Jun 2025, 08:03 UTC781 views2 reactionsread 7 August 2026 Photo
🚩 ರಾಜಮಾತೆ ಜಿಜಾಬಾಯಿ ಆದರ್ಶವನ್ನು ಪಾಲಿಸುವುದು ಅತ್ಯಾವಶ್ಯಕ !🌸
‘ಛತ್ರಪತಿ ಶಿವಾಜಿಯವರು ಹಿಂದವೀ ಸ್ವರಾಜ್ಯ ಅಂದರೆ ‘ಆದರ್ಶ ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿದರು. ಈ ರಾಷ್ಟ್ರವು ನಿರ್ಮಾಣವಾಗಲೆಂದು ರಾಜಮಾತೆ ಜಿಜಾಬಾಯಿ ಶಿವಾಜಿಯ ಬಾಲ್ಯದಲ್ಲಿಯೆ ಇದರ ಬೀಜವನ್ನು ಬಿತ್ತಿದರು. ಅವರಲ್ಲಿ ಜಾಜ್ಜ್ವಲ್ಯಮಾನ ಧರ್ಮಾಭಿಮಾನ ಹಾಗೂ ರಾಷ್ಟ್ರಾಭಿಮಾನವನ್ನು ನಿರ್ಮಿಸಿದರು. ಜಿಜಾಬಾಯಿ ಶಿವಾಜಿಗೆ ಶಸ್ತ್ರಾಸ್ತ್ರಗಳ ಪ್ರಶಿಕ್ಷಣ ನೀಡಿ ಅವರಲ್ಲಿ ಕ್ಷಾತ್ರವೃತ್ತಿಯನ್ನು ಜಾಗೃತಗೊಳಿಸಿದರು.
ಪೂರ್ಣ ಲೇಖನ ಓದಿ👇 : https://www.…
❤1👍1
16 Jun 2025, 06:21 UTC837 viewsread 7 August 2026 Photo
🌳ನೈಸರ್ಗಿಕ ವಿಪತ್ತು – ಕಾರಣಗಳು🌳🌳
ನಿಸರ್ಗವು ಸೇಡು ತಿರಿಸಿಕೊಳ್ಳುತ್ತಿದೆ .
ಮುಯ್ಯಿಗೆ ಮುಯ್ಯಿ’ ಇದು ನಿಸರ್ಗದ ಶಾಶ್ವತವಾದ ನಿಯಮವಾಗಿದೆ. ಧರ್ಮಾಚರಣೆ ಮಾಡದಿರುವ ಮಾನವಿ ಪಶುಗಳ ಕ್ರೌರ್ಯವೇ ನಿಸರ್ಗಕ್ಕೆ ಸೇಡು ತೀರಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ತಂದಿಡುತ್ತದೆ. ‘ಗಿಡಗಳ ರಹಸ್ಯಮಯ ಜೀವನ’ – ಪೀಟರ್ ಟೊಮ್ಕಿನ್ಸ ಹಾಗೂ ಕ್ರಿಸ್ಟೋಫರ್ ಬರ್ಡ್ ಈ ಶಾಸ್ತ್ರಜ್ಞರ ಗ್ರಂಥವು ಆ ನಿಯಮಗಳ ಅತ್ಯುತ್ತಮ ವಿಶ್ಲೇಷಣೆ ಮಾಡಿ ಅದನ್ನು ಸಿದ್ಧಪಡಿಸುತ್ತದೆ.
ಪೂರ್ಣ ಲೇಖನ ಓದಲು👇:
https://www.hindujagruti.org/hindu…
14 Jun 2025, 05:38 UTC900 viewsread 7 August 2026 Photo
ದ್ರೌಪದಿಯ ಪಾತ್ರೆ !
ಯಾವುದೇ ಗೃಹಿಣಿಯು ಮನೆಯಲ್ಲಿ ಸಾಮಗ್ರಿಗಳು ಕಡಿಮೆ ಇರುವಾಗಲೂ ಅತಿಥಿಗಳ ಆದರಾತಿಥ್ಯ ಮಾಡಿ ಪ್ರಸನ್ನಗೊಳಿಸಿದರೆ ಅವರ ಬಳಿ ‘ದ್ರೌಪದಿಯ ಪಾತ್ರೆಯು’ ಇದೆ ಎಂದು ಹೇಳಲಾಗುತ್ತದೆ.
ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ ಪಾಂಡವರ ರಾಜ್ಯವನ್ನು ಕಸಿದುಕೊಂಡಿದ್ದರು. ಹಾಗೂ ಅವರನ್ನು ೧೨ ವರ್ಷಗಳ ವನವಾಸ ಹಾಗೂ ೧ ವರ್ಷದ ಅಜ್ಞಾತವಾಸಕ್ಕಾಗಿ ಕಳಿಸಿದರು. ಕುರುಡನಾಗಿದ್ದ ಧೃತರಾಷ್ಟ್ರನು ಹಸ್ತಿನಾಪುರದ ರಾಜನಾಗಿದ್ದನು. ಇದರಿಂದಾಗಿ ದೃತರಾಷ್ಟ್ರನ ಮಗ ದುರ್ಯೋಧನನ ಕೈಯಲ್ಲಿ ರಾಜ್ಯದ ಕಾ…
10 Jun 2025, 04:28 UTC947 views3 reactionsread 7 August 2026 Photo
🌸 ವಟಸಾವಿತ್ರಿ ವ್ರತ (ವಟ ಪೌರ್ಣಿಮೆ) 🌸
ವಟಸಾವಿತ್ರಿಯ ವ್ರತ ಆರಂಭದ ಹಿನ್ನೆಲೆ
ಸಾವಿತ್ರಿಯು ಸತ್ಯವಾನನ ಪ್ರಾಣಹರಣದ ನಂತರ ಯಮಧರ್ಮನೊಂದಿಗೆ ಮೂರು ದಿನಗಳ ವರೆಗೆ ಶಾಸ್ತ್ರ ಚರ್ಚೆ ಮಾಡಿದಳು. ಆಗ ಪ್ರಸನ್ನನಾದ ಯಮಧರ್ಮನು ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು. ಈ ಚರ್ಚೆಯು ವಟ ವೃಕ್ಷದ (ಆಲದಮರ) ಕೆಳಗೆ ಆದುದರಿಂದ ವಟವೃಕ್ಷಕ್ಕೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು. ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವು ಹೆಚ್ಚಾಗಲಿ ಎಂದು ಸ್ತ್ರೀಯರು ಈ ವ್ರತವನ್ನು ಆರಂಭಿಸಿದರು.
ವ್ರತದ ದೇವತೆ : ಸಾವಿತ್ರಿಯೊಂದಿಗೆ ಬ್ರಹ್ಮನ…
❤3
9 Jun 2025, 04:43 UTC831 views2 reactionsread 7 August 2026 Photo
🌸 ಶಿವರಾಜ್ಯಾಭಿಷೇಕ ದಿನದ ಮಹತ್ವ ! 🌸
ಜ್ಯೇಷ್ಠ ಶುಕ್ಲ ಪಕ್ಷ ತ್ರಯೋದಶಿ, ಈ ದಿನವು ‘ಶಿವರಾಜ್ಯಾಭಿಷೇಕ ದಿನ’ವಾಗಿದೆ. ಇಂದಿನ ರಾಜಕಾರಣಿಗಳ ಮಾನಸಿಕತೆಯನ್ನು ನೋಡಿದ ಮೇಲೆ ಶಿವಾಜಿ ಮಹಾರಾಜರಂತಹ ರಾಜರ ಆವಶ್ಯಕತೆ ನಮಗಿದೆಯೆಂದು ನಮ್ಮೆಲ್ಲರ ಗಮನಕ್ಕೆ ಬರುತ್ತದೆ.
ಶಿವಾಜಿ ಮಾಹಾರಾಜ ಎಂದರೆ ನಮ್ಮ ರಕ್ಷಕ !
ದೇವರು, ದೇಶ ಮತ್ತು ಧರ್ಮ ಸಂಕಟದಲ್ಲಿರುವಾಗ ಛತ್ರಪತಿ ಶಿವಾಜಿ ಮಹಾರಾಜರ ರೂಪದಲ್ಲಿ ಹಿಂದೂಗಳಿಗೆ ರಕ್ಷಕನು ದೊರಕಿ ಪ್ರಜೆಗಳ (ಜನರ) ದೈನ್ಯತೆಯು ದೂರವಾಗುವುದು : ಶಿವಾಜಿ ಮಹಾರಾಜರ ರಾಜ್ಯಾಭಿಷೇಕವಾಗುವ ಮುಂಚೆ ನಮ್…
❤1🙏1
Showing the 12 most recent of 20 posts we hold for @Balasanskara. View and reaction counts are the latest single reading for each post, not a live figure, and a recent post is still accumulating both. A view count marked ≈ was rounded by Telegram before we ever saw it — t.me prints views in full below 1,000 and to three significant figures above, so ≈1,200,000 means somewhere between 1,150,000 and 1,249,999. Unmarked counts are exact. Text is reproduced from the public post preview and truncated for length.